ಕೋಲಿಕ್ ಆಮ್ಲ

	ಪಿತ್ತರಸದಲ್ಲಿ ಟಾರೀನ್ ಮತ್ತು ಗೈಸಿನ್‍ಗಳೊಡನೆ ಸಂಯೋಜಿತವಾಗಿ ಲವಣ ರೂಪದಲ್ಲಿರುವ, ಸ್ಟೆರಾಯ್ಡ್‍ಗಳ ಗುಂಪಿಗೆ ಸೇರಿದ ಒಂದು ಮುಖ್ಯ ಆಮ್ಲ.

ಚಿತ್ರ-1

 
ಟಾರೋ ಕೋಲಿಕ್ ಆಮ್ಲ ಮತ್ತು ಗ್ಲೈಕೋ ಕೋಲಿಕ್ ಆಮ್ಲ ಲವಣಗಳು ಎಣ್ಣೆ, ಕೊಬ್ಬುಗಳನ್ನು ಸಣ್ಣ ಕಣಗಳಾಗಿ ಒಡೆದು ನೀರಿನಲ್ಲಿ ವಿರಳವಾಗಿ ಹರಡುವಂತೆ ಮಾಡುವುದರಿಂದ ಎನ್‍ಜೈóಮುಗಳ ವರ್ತನೆಗೆ ಅನುಕೂಲವಾಗಿ ಜೀರ್ಣಕಾರ್ಯ ಸುಲಭವಾಗುತ್ತದೆ. ಪ್ರಾಣಿಗಳ ಪಿತ್ತರಸದಿಂದ ಕೋಲಿಕ್ ಆಮ್ಲವನ್ನು ಮುಕ್ತಸ್ಥಿತಿಯಲ್ಲಿ ತಯಾರಿಸಬಹುದು. ಕೆಲವು ಔಷಧಿಗಳಲ್ಲಿ ಇದರ ಉಪಯೋಗ ಉಂಟು. ಹಲವಾರು ಔಷಧೀಯ ರಾಸಾಯನಿಕಗಳ ತಯಾರಿಕೆಯಲ್ಲಿ ಮಧ್ಯವರ್ತಿಯಾಗಿ ಇದನ್ನು ಬಳಸುತ್ತಾರೆ.
(ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ